ಬುಧವಾರ, ಮಾರ್ಚ್ 7, 2012

ಜೀವನಗಾಥೆ

ಬಳಸಿ ಎಸೆದ ಪ್ಲಾಸ್ಟಿಕ್ಕಿನ ಚೀಲ
ಗಾಳಿಯ ಒತ್ತಡಕ್ಕೆ ಸಿಲುಕಿ ಹಾರುತ್ತಾ
ಪರಿಧಿಯಿಲ್ಲದಂಬರದಲಿ ಏಕಾಂಗಿ

ಇರುವುದೆಲ್ಲವ ಕಳಚಿ
ಹಗುರವಾದರೆ ಹೀಗೆ
ನೆಲೆಯಿಲ್ಲ, ನೆಲದ ಅಕ್ಕರೆಯಿಲ್ಲ
ಗಾಳಿ ಒಯ್ದತ್ತ ತೂರಿ
ಮಳೆ ಹುಯ್ದತ್ತ ಕೊಚ್ಚಿ
ಕಳೇಬರವಾಗಿ ಕಳಕೊಂಡು ತನ್ನ

ಹೆತ್ತೊಡಲ ಹೊಟ್ಟೆಯಲಿ ಉಸಿರು
ಸಿಕ್ಕುವಂತೆ ಬಿಗಿದು, ಮೂಲೆಯ
ಮೊಳೆಗೆ ನೇತಾಕಿ, ಸಕ್ಕರೆ,
ಬೆಲ್ಲ, ಹಿಟ್ಟು, ಬಟ್ಟೆ, ತರಕಾರಿ,
ಹಣ್ಣು, ಕಾಯಿ, ಬಣ್ಣ, ಬಾಟಲಿ
ಕಿತ್ತು ಬರುವಂತೆ ಕತ್ತು
ಹೊತ್ತೊಯ್ದರೂ ಚಕಾರವೆತ್ತಿಲ್ಲ.
ಕೊರೆವ ಚಳಿಯಲಿ ಕಾಪಿಟ್ಟು,
ಮಗನ ಆಟಿಕೆಗಳ ಕುಟ್ಟಿ,
ಬೇಸರವೇರಿ ಹವೆಯೂದಿ
ಫಟ್ಟನೊಡೆವ ನೋವಿಗಾರ್ತನಾದ
ಕಸ ಮುಸುರೆ ತುರುಕಿ
ಕೊಳಚೆಗೆಸೆದರೂ ನೊಂದಿಲ್ಲ
ಕಾಯಕಗೈದ ಸಾರ್ಥಕತೆ ಮನದಲ್ಲಿ

ಇಂದು ಅಂತ್ಯವಿರದಂತರಿಕ್ಷದಲಿ
ಗೊತ್ತು ಗುರಿಯಿಲ್ಲದೆ ಹಾರುವ
ವಸ್ತು ಕಂಡು, ಮುದಗೊಂಡು
ಹಾರಿ ಬರುತಿಹ ಹಕ್ಕಿ
ಕೊಕ್ಕಿನಲ್ಲಿ ಕುಕ್ಕಿ ಫಡಫಡ
ಫರ್ರನೆಯ ನಾದಕೆ ಪುಳಕವಾಗಿ
ಹಾರಿಬಿಟ್ಟರೆ ನನ್ನ, ಇನ್ನೊಂದು
ಹಕ್ಕಿ ಬಂದು, ಹಾರಿ ಚೆಲ್ಲುವಾಟ
ಸಾವಿನ ನೆನಪಾಗದೆ ಇಹುದೇ?

ಮರಣವೂ ಇಲ್ಲ ಕೊನೆಗೆ
ತುಂಡು ತುಂಡಾಗಿ ಸುಟ್ಟು
ಕೊಳಚೆಯಲಿ ಕೊಚ್ಚಿ
ಪರಿಸರ ಮಾಲಿನ್ಯದ ಪಟ್ಟ ಬೇರೆ!

----ಪ್ರವೀಣ.

10 ಕಾಮೆಂಟ್‌ಗಳು:

|| ಪ್ರಶಾಂತ್ ಖಟಾವಕರ್ || *Prashanth P Khatavakar* ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
|| ಪ್ರಶಾಂತ್ ಖಟಾವಕರ್ || *Prashanth P Khatavakar* ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
|| ಪ್ರಶಾಂತ್ ಖಟಾವಕರ್ || *Prashanth P Khatavakar* ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
|| ಪ್ರಶಾಂತ್ ಖಟಾವಕರ್ || *Prashanth P Khatavakar* ಹೇಳಿದರು...

ಸಂಗೀತದ ಸಿಹಿಯ ಸವಿಯಂತೆ ನಿಮ್ಮ ಕವಿತೆಗಳ ವಿಚಾರ ಮತ್ತು ಅರ್ಥಗರ್ಭಿತ ಚಿಂತೆ.. ಪದಗಳ ಮಾಯಾಜಾಲ ಓದುಗರ ಸೆಳೆಯಲು .. ಸಾಲು ಸಾಲಿನಲ್ಲೂ ವಿಷಯ ವರ್ಣನೆ ಅತೀ ಸೊಗಸು.. ಪ್ರತೀ ಸಾರಿಯೂ ವಿಶೇಷ ವಸ್ತು ವಿಚಾರವನ್ನು ಹೊಸತನದಲ್ಲಿ ಪ್ರಸ್ತುತ ಪಡಿಸುತ್ತೀರಾ.. ಈ ವಿಚಾರ ಪ್ರಶಂಸನೀಯ ಮತ್ತು ಕವಿತೆಯನ್ನು ರಚಿಸುವ ಆಸಕ್ತಿ ಇರುವವರು ನಿಮ್ಮಿಂದ ಹಲಾವರು ವಿಷಯಗಳ ಬಗ್ಗೆ ಕಲಿಯಬಹುದು .. ತಿಳಿಯಬಹುದು.. ಪ್ಲಾಸ್ಟಿಕ್ ಮತ್ತು ಜೀವನದ ನಡುವಿನ ಹೊಂದಾಣಿಕೆಯಲ್ಲಿ ಬದುಕಿನ ಚಿತ್ರ ವಿಚಿತ್ರ ಸತ್ಯ ದರ್ಶನ ಈ ನಿಮ್ಮ ಕವಿತೆ.. :)

ರವಿ ಮೂರ್ನಾಡು ಹೇಳಿದರು...

ಮರಣವೂ ಇಲ್ಲ ಕೊನೆಗೆ
ತುಂಡು ತುಂಡಾಗಿ ಸುಟ್ಟು
ಕೊಳಚೆಯಲಿ ಕೊಚ್ಚಿ
ಪರಿಸರ ಮಾಲಿನ್ಯದ ಪಟ್ಟ ಬೇರೆ!
: ನಿಮ್ಮ ಬ್ಲಾಗ್ ಅನ್ನು ಪರಿಶೀಲಿಸಿದೆ. ಉತ್ತಮ ಭವಿಷ್ಯದ ಕವಿ ಮಿತ್ರ ನೀವು. ನಿಮ್ಮಿಂದ ಹೆಚ್ಚಿನದನ್ನು ಅಪೇಕ್ಷಿಸುತ್ತೇವೆ. ಶುಭವಾಗಲಿ. ನಿಮ್ಮಲ್ಲಿ ಕಾವ್ಯದ ಸೂಕ್ಷ್ಮತೆ ಕಂಡು ಖುಷಿ ಆಯಿತು.

ಮಂಜಿನ ಹನಿ ಹೇಳಿದರು...

ಪ್ರವೀಣಣ್ಣ ತುಂಬಾ ಚೆನ್ನಾಗಿ ಬರೆಯುತ್ತೀರಿ.. ಬರವಣಿಗೆಯನ್ನು ತುಂಬಾ ಸೂಕ್ಷ್ಮ ಹಂದರವನ್ನು ಹುದುಗಿಸಿಕೊಂಡಿದ್ದೀರಿ.. ಓದುಗರ ಕೈಯಲ್ಲಿ ಕವಿತೆಯನ್ನು ಓದಿಸುವ ತಾಕತ್ತು ನಿಮಗಿದೆ.. ಒಬ್ಬ ಮನುಷ್ಯ ಹುಟ್ಟಿದಾಗಿನಿಂದ ತನ್ನ ಜೀವನದಲ್ಲನುಭವಿಸುವ ತೊಳಲಾಟಗಳನ್ನು ಓದುಗರ ಮನದಾಳಕ್ಕೆ ನುಗ್ಗಿಸಿದ್ದೀರಿ.. ರವಿಯಣ್ಣ ಹೇಳಿದಂತೆ ನಿಮ್ಮಿಂದ ಇನ್ನಷ್ಟು ನಿರೀಕ್ಷಿಸುತ್ತವೆ.. ಶುಭವಾಗಲಿ..

Unknown ಹೇಳಿದರು...

ಪ್ರವೀಣ್
ಅದೊಂದು ಪ್ಲಾಸ್ಟಿಕ್ ನ ಚೀಲ ಅಂಬರದಲ್ಲಿ ಸುಖಾಸೀನವಾಗಿ ಹಾರುತ್ತಿರುವ ದ್ರಶ್ಯದ ಜತೆಗೇ
ಅರ್ಥದಾಳದಲ್ಲಿ ಮತ್ತು ಶೈಲಿಯ ಓಘದಲ್ಲಿ
ಕವನ ತುಂಬಾನೇ ಖುಷಿ ಕೊಟ್ಟಿತು

Unknown ಹೇಳಿದರು...

ಪ್ರವೀಣ್
ಅದೊಂದು ಪ್ಲಾಸ್ಟಿಕ್ ನ ಚೀಲ ಅಂಬರದಲ್ಲಿ ಸುಖಾಸೀನವಾಗಿ ಹಾರುತ್ತಿರುವ ದ್ರಶ್ಯದ ಜತೆಗೇ
ಅರ್ಥದಾಳದಲ್ಲಿ ಮತ್ತು ಶೈಲಿಯ ಓಘದಲ್ಲಿ
ಕವನ ತುಂಬಾನೇ ಖುಷಿ ಕೊಟ್ಟಿತು

Unknown ಹೇಳಿದರು...

ಪ್ರವೀಣ್
ಅದೊಂದು ಪ್ಲಾಸ್ಟಿಕ್ ನ ಚೀಲ ಅಂಬರದಲ್ಲಿ ಸುಖಾಸೀನವಾಗಿ ಹಾರುತ್ತಿರುವ ದ್ರಶ್ಯದ ಜತೆಗೇ
ಅರ್ಥದಾಳದಲ್ಲಿ ಮತ್ತು ಶೈಲಿಯ ಓಘದಲ್ಲಿ
ಕವನ ತುಂಬಾನೇ ಖುಷಿ ಕೊಟ್ಟಿತು

Arathi ಹೇಳಿದರು...

ಬಹಳ ಅರ್ಥ ಗರ್ಭಿತ ವಾಗಿದೆ ಪ್ರವೀಣ್ . ಒಂದು ಪ್ಲಾಸ್ಟಿಕ್ ಚೀಲವನ್ನೂ ವಸ್ತುವಾಗಿಗಿತ್ತುಕೊಂಡು ಕವನ ಕಟ್ಟುವ ಪರಿ !ಓದುಗನನ್ನು ಬದುಕಿನ ಚೀಲದಲ್ಲಿ ನುಗ್ಗಿಸಿ, ನೋವು , ನಲ್ಲಿವು , ಸಾರ್ಥಕತೆಗೆ , ಅನುಭವಗಳಿಗೆ ತೆರೆದುಕೊಂಡು ಹೋಗುತ್ತದೆ,ತುಂಬಾ ಇಸ್ಥವಾಯಿತು
ಆರತಿ ಘತಿಕಾರ್