ಗುರುವಾರ, ಜೂನ್ 14, 2012

ಎಳೆತ
ನನ್ನ ಜೀವನವನೇ ಒಣಗ ಹಾಕಿದ
ಹಗ್ಗ ಕಿತ್ತು ಹೋಯಿತು ಗೆಳತೀ,

ಅಲ್ಲಲ್ಲಿ ಸಿಡಿದ ರಕ್ತ,
ತುಂಬೆಲ್ಲಾ ಹರಡಿದ ಕಣ್ಣೀರು,
ಅವರಿವರು ಕ್ಯಾಕರಿಸಿದ ಉಗುಳು,
ಎಲ್ಲ ಒಣಗಲೆಂದು ತೂಗ ಹಾಕಿದ್ದೆ.

ಜೊತೆಗೊಂದಿಷ್ಟು ಕನಸುಗಳು,
ಅದರಲ್ಲೊಂದು ಮನಸು,
ಆಗಾಗ ಫಳಫಳನೆ ಹೊಳೆವ
ಒಂದಿನಿತು ಮಹಾತ್ವಾಕಾಂಕ್ಷೆಗಳು,
ಕಚಗುಳಿಯಿಡುವ ಆಶೆಗಳು.

ಕಣ್ಣಂಚಿನಲ್ಲಿ ಬೀಡು ಬಿಟ್ಟ
ಕೋಗಿಲೆ ಇಟ್ಟ ತತ್ತಿ
ಗೂಡಲ್ಲಿ ಬಚ್ಚಿ ತೂಗಿದ್ದೆ
ಮಡಚಿದರೆ ಮುರಿದೋಗುವ
ಬಟ್ಟೆಗಳಿಗೆಂದು ಹ್ಯಾಂಗರುಗಳು,
ಯಾವುದೂ ಹಾರಿ ಹೋಗದಿರಲೆಂದು
ಹಚ್ಚಿ ಉಳಿದ ಕ್ಲಿಪ್ಪುಗಳು
ನಾಳೆಗಿರಲೆಂದು ಕೂಡಿ ಜೋಡಿಸಿಟ್ಟ
ಕೊಬ್ಬರಿ ಬಟ್ಟಲುಗಳು, ಉಳ್ಳಾಗಡ್ಡಿ,
ಜೋತು ಬಿದ್ದ ಬಳ್ಳೊಳ್ಳಿ ಗಿಡಗಳು,
ಶ್ರೀಖಂಡ ಮಾಡಲೆಂದು ಕಟ್ಟಿದ ಮೊಸರು,
ಮೊಳಕೆಯೊಡೆಯಲೆಂದು ಹೆಸರುಕಾಳು,
ಎಲ್ಲ ಎಲ್ಲ ಅಪ್ಪಚ್ಚಿಯಾಗಿತ್ತು

ನೀ ರೊಚ್ಚಿಗೆದ್ದು ಎಳೆದ ಎಳೆತಕ್ಕೆ ಗೆಳತಿ,
ನನ್ನ ಜೀವನವನೇ ಒಣಗ ಹಾಕಿದ
ಹಗ್ಗ ಕಿತ್ತು ಹೋಗಿತ್ತು.

....ಪ್ರೀತೀಶ

1 ಕಾಮೆಂಟ್‌:

|| ಪ್ರಶಾಂತ್ ಖಟಾವಕರ್ || *Prashanth P Khatavakar* ಹೇಳಿದರು...

eÉÆÃvÀÄ ©zÀÝ §¼ÉÆî½î VqÀUÀ¼ÀÄ,
²æÃRAqÀ ªÀiÁqÀ¯ÉAzÀÄ PÀnÖzÀ ªÉƸÀgÀÄ,
ªÉƼÀPÉAiÉÆqÉAiÀįÉAzÀÄ ºÉ¸ÀgÀÄPÁ¼ÀÄ,
J®è J®è C¥ÀàaÑAiÀiÁVvÀÄÛ

¤Ã gÉÆaÑUÉzÀÄÝ J¼ÉzÀ J¼ÉvÀPÉÌ UɼÀw,
£À£Àß fêÀ£ÀªÀ£Éà MtUÀ ºÁQzÀ
ºÀUÀÎ QvÀÄÛ ºÉÆÃVvÀÄÛ.

....ಪ್ರೀತೀಶ

------ಸರಿ ಕಾಣಿಸುತ್ತಿಲ್ಲಾ .. ಇದು ಯಾವ ಲಿಪಿಯಲ್ಲಿ ಬರೆದಿದ್ದೀರಾ .. ಇದನ್ನು ಹೇಗೆ ಓದುವದು ಮತ್ತು ಕೆಲವು ವೆಬ್`ಸೈಟ್`ಗಳು ಸಹ ಹೀಗೆಯೇ ಕಾಣುತ್ತವೆ.. ಈ ಕನ್ನಡವನ್ನು ಯಾವ ಸಾಫ್ಟ್`ವೇರ್ ಉಪಯೋಗಿಸಿ .. ನೋಡಬೇಕು .. :)----------------------------