ಶುಕ್ರವಾರ, ಫೆಬ್ರವರಿ 24, 2012

ಒಂದು ಹನಿ ಅಮೃತ

ಒಂದು ಹನಿ ಅಮೃತ
-----------------

ಬ್ರಹ್ಮಾಂಡವೆಲ್ಲಾ ಅಲೆದು
ಬಳಲಿ ಬೆಂಡಾಗಿ ಬಂದ ಮನಕ್ಕೆ
ಕಂಡಿದ್ದು ನೀನು....

ವೀಳ್ಯೆದೆಲೆ, ಸುಣ್ಣ, ಕಾಚು,
ಅಡಿಕೆಯನ್ನು ಮಡಚಿ
ಆಲಸಿ ಮಧ್ಯಾಹ್ನದಲಿ
ಕಟ್ಟೆಯ ಮೇಲೆ ಕುಳಿತು
ಮೆಲ್ಲಿದಂತಾಹ್ಲಾದಗೊಂಡಿತು.

ಬಾಗಿಲು ತಟ್ಟಿ ಒಳಬಂದ
ಕೋಗಿಲೆಯ ನಿನಾದಕೆ
ದಿಟ್ಟಿ ನೆಟ್ಟಿದ್ದು ನಿನ್ನ
ಕಣ್ಣ ಒಳಗೆ ಸಿಕ್ಕ ಕೂದಲಲಿ

ಓದಬೇಕೆಂದುಕೊಂಡರೆ
ಅಂಗಳ, ಗೋಡೆ, ಬೀದಿ,
ಸರ್ರನೆ ಜಾರುವ ಕಾರುಗಳು,
ಕಂಬ, ಸಂಬಂಧಗಳೆಲ್ಲ
ಚೀರಾಡಿಬಿಟ್ಟವು...

ನಿನ್ನ ಮನದ ಭಾವಗಳೆಲ್ಲ
ಚದುರಿ, ಸಿಡಿದದ್ದೊಂದು
ನೆಟ್ಟಿತು ಎನ್ನ ಎದೆಯ ಒಳಗೆ.
ಕಿತ್ತು ತೆಗೆದರೆ ಒಸರಿದ್ದು
ರಕ್ತವಲ್ಲ, ಒಂದು ಹನಿ ಅಮೃತ

ಸುವಾಸನೆಗೆ ಮನವೆಲ್ಲಾ
ಘಮಫಮನೆ ಅರಳಿತು.

.....ಪ್ರವೀಣ

4 ಕಾಮೆಂಟ್‌ಗಳು:

ದಿಲೀಪ್ ಕುಮಾರ ಶೆಟ್ಟಿ ಹೇಳಿದರು...

ಪ್ರೀತಿಯ ಸಿಹಿ ಉಂಡವನ ಪ್ರೀತಿಯ ಮಾತು. ಚೆನ್ನಾಗಿದೆ

Badarinath Palavalli ಹೇಳಿದರು...

ಹೊಸ ರೀತಯ ಕಾವ್ಯ ಪ್ರಯೋಗದಲ್ಲಿ ತಾವು ಗೆದ್ದಿದ್ದಿರಿ. ಭಾಷೆಯ ಮೇಲಿನ ನಿಮ್ಮ ಹಿಡಿತ ಮತ್ತು ಪ್ರಾಸಕ್ಕೆ ಜೋತೆ ಬೀಳದೆ ಲಯಕ್ಕೆ ಅಂಟಿಕೊಂಡ ನಿಮ್ಮತನ ಹೀಗೆ ಮುಂದುವರೆಯಲಿ.

ಶಭಾಷ್!...

ನನ್ನ ಬ್ಲಾಗಿಗೂ ಸ್ವಾಗತ.

Unknown ಹೇಳಿದರು...

ಧನ್ಯವಾದಗಳು ದಿಲೀಪ ಹಾಗೂ ಬದರಿನಾಥ ಅವರಿಗೆ. ಖಂಡಿತವಾಗಿ ತಮ್ಮ ಬ್ಲಾಗಿಗೆ ಭೇಟಿ ನೀಡುತ್ತೇನೆ..

ಮಂಜಿನ ಹನಿ ಹೇಳಿದರು...

ಚೆಂದದ ಕವಿತೆ ಪ್ರವೀಣಣ್ಣ.. ನಿಮ್ಮದೇ ಆದ ಒಂದು ವಿಶಿಷ್ಟ ಶೈಲಿ ರೂಢಿಸಿಕೊಂಡಿದ್ದೀರಿ ನೀವು ಅದು ನಿಮ್ಮಲ್ಲಿನ ಸೃಜನಶೀಲ ಬರಹಗಾರನ ತಾಕತ್ತು.. ಭಾವಗಳನ್ನು ವಿಭಿನ್ನವಾಗಿ ತೆರೆದಿಡಬಲ್ಲಿರಿ ಅದು ಕವಿತೆಯನ್ನು ಓದಿಸುತ್ತದೆ.. ಅದರ ಒಂದು ಝಲಕ್ ಇಲ್ಲಿದೆ..
ನಿನ್ನ ಮನದ ಭಾವಗಳೆಲ್ಲ
ಚದುರಿ, ಸಿಡಿದದ್ದೊಂದು
ನೆಟ್ಟಿತು ಎನ್ನ ಎದೆಯ ಒಳಗೆ.
ಕಿತ್ತು ತೆಗೆದರೆ ಒಸರಿದ್ದು
ರಕ್ತವಲ್ಲ, ಒಂದು ಹನಿ ಅಮೃತ

ಸುವಾಸನೆಗೆ ಮನವೆಲ್ಲಾ
ಘಮಫಮನೆ ಅರಳಿತು.
ಪ್ರೀತಿಯನ್ನು ಪ್ರತಿಬಿಂಬಿಸಿರುವ ಪರಿ ಚೆಂದವಿದೆ.. ಪ್ರೀತಿಯೂ ಎದೆಯನ್ನು ಬಾಣದಂತೆಯೇ ನಾಟುತ್ತದೆ.. ಆದರೆ ಬಾಣ ನಾಟಿದಾಗ ರಕ್ತಸ್ರಾವ, ಪ್ರೀತಿ ನಾಟಿದಾಗ ಭಾವ ಸ್ರಾವ.. ಚೆನ್ನಾಗಿದೆ ಕವಿತೆ..:)